ಜೈನ್ (ಡೀಮ್ಡ್ -ಟು-ಬಿ ಯುನಿವರ್ಸಿಟಿ)ಯ ಸ್ಕೂಲ್ ಆಫ್ ಕಾಮರ್ಸ್ , ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಐ ಟಿ, ಸ್ಕೂಲ್ ಆಫ್ ಹ್ಯೂಮಾನಿಟೀಸ್ ಮತ್ತು ಸೋಷಿಯಲ್ ಸೈನ್ಸಸ್‌ನ ಕನ್ನಡ ಭಾಷಾ ವಿಭಾಗವು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು ಹಾಗೂ ಬಸವ ಬಳಗ ಮಸ್ಕತ್, ಬಸವ ಕೇಂದ್ರ ಉತ್ತರ ಅಮೇರಿಕಾ ಹಾಗೂ ಕನ್ನಡ ಅಸೋಸಿಯೇಶನ್ ಇಟಲಿ ಇವರ ಸಹಯೋಗದಲ್ಲಿ ದಿನಾಂಕ: 3-3-2022ರಂದು "ಕರ್ನಾಟಕದ ಸ್ವಾತಂತ್ರ್ಯ ಮತ್ತು ಏಕೀಕರಣ ಇತಿಹಾಸ "ಎಂಬ ವಿಷಯದ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.ಉದ್ಘಾಟಕರಾಗಿ ಡಾ.ಮಲ್ಲೇಪುರಂ ಜಿ ವೆಂಕಟೇಶ್ ವಿಶ್ರಾಂತ ಕುಲಪತಿಗಳು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಇವರು ವಿಚಾರ ಸಂಕಿರಣ ಮತ್ತು ಆದಿಕವಿ ಪಂಪ ಸಂಶೋಧನಾ ವೇದಿಕೆ ಉದ್ಘಾಟಿಸಿ ಮಾತನಾಡುತ್ತ ಇಂದಿನ ಯುವ ಪೀಳಿಗೆ ಕರ್ನಾಟಕ ಏಕೀಕರಣದ ಕುರಿತು ಚಿಂತಿಸುವ ಕಾಲ ಎದುರಾಗಿದೆ, ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಸಂರಕ್ಷಿಸುವ ಗುರುತರ ಜವಾಬ್ದಾರಿ ಹೊರಬೇಕಾಗಿದೆ ಎಂದರು.ಪಂಪನ ಹೆಸರಿನ ಸಂಶೋಧನಾ ವೇದಿಕೆ ಭವಿಷ್ಯತ್ತಿನಲ್ಲಿ ಅತ್ಯುತ್ತಮ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂಬ ಹಾರೈಕೆಯನ್ನು ವ್ಯಕ್ತಪಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ ಕೊಟ್ರೇಶ್ ಭಾರತವನ್ನು ಮತ್ತು ಕರ್ನಾಟಕವನ್ನು ಸ್ವತಂತ್ರಗೊಳಿಸುವಲ್ಲಿ ವಿವಿಧ ಸಂಸ್ಥಾನಗಳ ಸಂಸ್ಥಾನಿಕರ ಪಾತ್ರ ಬಹು ದೊಡ್ಡದು ಎನ್ನುತ್ತ ವಿಚಾರ ಸಂಕಿರಣದ ಆಶಯವನ್ನು ವಿಸ್ತೃತವಾಗಿ ವಿವರಿಸಿದರು. ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ.ಸದಾನಂದ ನೆಲ್ಕುದರಿ ಜೈನ್ ಡೀಮ್ಡ್-ಟು-ಬಿ ಯುನಿವರ್ಸಿಟಿಯ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್ ಕುಲಸಚಿವರಾದ ಡಾ. ಎನ್.ವಿ. ಹೆಚ್ ಕೃಷ್ಣನ್,ಅಕಾಡೆಮಿಕ್ಸ್ ಮತ್ತು ಪ್ಲಾನಿಂಗ್ ನ ನಿರ್ದೇಶಕರಾದ ಪ್ರೊ.ಕೆ. ಆರ್.ಶ್ರೀಧರಮೂರ್ತಿ, ಡಾ. ರಜನಿ ಜಯರಾಮ್ ಮೊದಲಾದವರು ಪಾಲ್ಗೊಂಡಿದ್ದರು. ಪ್ರೊ. ರಾಜೇಶ್ವರಿ ವೈ ಎಂ ಸ್ವಾಗತಿಸಿದರು. ಪ್ರೊ. ರಾಜಕುಮಾರ್ ಬಡಿಗೆರ ಕಾರ್ಯಕ್ರಮ ನಿರೂಪಿಸಿದರು, ಈ ವಿಚಾರ ಸಂಕಿರಣದಲ್ಲಿ ವಿವಿಧ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು. ಜೈನ್ ವಿಶ್ವ ವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಕರ್ನಾಟಕ ಸ್ವಾತಂತ್ರ್ಯ ಮತ್ತು ಏಕೀಕರಣ ಇತಿಹಾಸಕ್ಕೆ ಸಂಬಂಧಿಸಿದಂತೆ ನಾಡಿನ ವಿವಿಧ ಸ್ಥಳಗಳಿಂದ ಬಂದಿದ್ದ ಸಂಶೋಧನಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು. ಪ್ರಬಂಧ ಮಂಡನಾ ಗೋಷ್ಠಿಯ ಅಧ್ಯಕ್ಷತೆಯನ್ನು ಬಿ ಎಂ ಎಸ್ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೀಲಾದೇವಿ ಮಳೀಮಠ್ ವಹಿಸಿದ್ದರು ಮತ್ತು ಜೈನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್ ವಸಂತಕುಮಾರ್ ಪ್ರತಿಕ್ರಿಯೆಯನ್ನು ನೀಡಿದರು.
ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ವೀರಶೆಟ್ಟಿಅವರು ಸಮಾರೋಪ ನುಡಿಗಳನ್ನಾಡುತ್ತಾ ಕನ್ನಡ ನಾಡು ಭವ್ಯ ಸಂಸ್ಕೃತಿಯನ್ನು ಹೊಂದಿರುವ ನಾಡು. ಪಂಪ, ರನ್ನ, ಪೊನ್ನ, ಬಸವಾದಿ ಶಿವಶರಣರು, ಹರಿಹರ, ಕುವೆಂಪು, ಬೇಂದ್ರೆಯವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಈ ಸಾಹಿತ್ಯದ ಓದಿನ ಜೊತೆಗೆ ನಮ್ಮ ಯುವಜನತೆ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದರು. ಸ್ಕೂಲ್ ಆಫ್ ಹ್ಯುಮಾನಿಟೀಸ್ ಮತ್ತು ಸೋಷಿಯಲ್ ಸೈನ್ಸಸ್ ನ ನಿರ್ದೇಶಕರಾದ ಡಾ. ಉಮಾ ಮುಗಳಿಯವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯ ವಹಿಸಿದ್ದರು. ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.