JAIN-UI 2021

ಕನ್ನಡ ವೇದಿಕೆಯ ಮತ್ತು ಕನ್ನಡ ಕಲಿ-ನಲಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದ ವರದಿ

ಜೈನ್‌ (ಡೀಮ್ಡ್‌-ಟು-ಬಿ) ಯೂನಿವರ್ಸಿಟಿ ಜಯನಗರ ಸ್ಕೂಲ್‌ ಆಫ್‌ ಕಾಮರ್ಸ್‌, ಸ್ಕೂಲ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌ ಅಂಡ್‌ ಐಟಿ, ಸ್ಕೂಲ್‌ ಆಫ್‌ ಹ್ಯೂಮನಿಟೀಸ್‌ನ ಕನ್ನಡ ಭಾಷಾ ವಿಭಾಗದ ವತಿಯಿಂದ ದಿನಾಂಕ 8-10-2021ರ ಶುಕ್ರವಾರದಂದು ಕನ್ನಡ ವೇದಿಕೆಯ ಮತ್ತು ಕನ್ನಡ ಕಲಿ-ನಲಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ವಿಜೇತ ಮತ್ತು ನಿರ್ದೇಶಕರಾದ ಶ್ರೀ ಡಿ. ಸತ್ಯಪ್ರಕಾಶ್‌ ಅವರು ತಮ್ಮ ಬಾಲ್ಯದ ದಿನಗಳಲ್ಲಿನ ತಮ್ಮ ಕೌಶಲ್ಯಗಳ ಬಗ್ಗೆ ತಿಳಿಸುತ್ತಾ ಭಾಷೆ ಪ್ರತಿಯೊಂದನ್ನು ಕಲಿಸುತ್ತದೆ. ನಾನು ಬೆಳೆದ ವಾತಾವರಣವು ನನ್ನ ಈ ಸಾಧನೆಗೆ ಕಾರಣ. ಇಂದಿನ ಯುವ ಜನಾಂಗ ಆಧುನಿಕ ಮಾಯೆಗೆ ಮಾರು ಹೊಗದೆ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತಾ ಬೆಳೆಯಬೇಕು ಎಂದರು. ಮಖ್ಯಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ಹಾಸ್ಯನಟ, ರಂಗಭೂಮಿ ಕಲಾವಿದ ಧರ್ಮಣ್ಣ ಕಡೂರುಅವರು ಗ್ರಾಮೀಣ ಸೊಗಡಿನ ಸ್ಪರ್ಶವನ್ನು ನಾವು ಯಾವತ್ತು ಕಳೆದುಕೊಳ್ಳಬಾರದು. ನನ್ನ ಇಂದಿನ ಸಾಧನೆಗೆ ಮಾತೃಭಾಷೆಯಾದ ಕನ್ನಡ ಕಾರಣ. ನಾವು ಇಂದು ಕರ್ನಾಟಕದಲ್ಲಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಸ್ಕೂಲ್‌ ಆಫ್‌ ಕಾಮರ್ಸ್ ನ ನಿರ್ದೇಶಕರಾದ ಡಾ. ದಿನೇಶ್‌ ನೀಲಕಂಠ್‌ಅವರು ಕನ್ನಡ ವೇದಿಕೆಯ ಮೂಲಕ ಕನ್ನಡ ಭಾಷಾ ವಿಭಾಗವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಶ್ರೀನಿವಾಸಯ್ಯನವರು ಕನ್ನಡ ಬಹು ಪ್ರಾಚೀನ ಮತ್ತು ಸಮೃದ್ಧವಾದ ಭಾಷೆಯಾಗಿದೆ. ನಮ್ಮ ಇಂದಿನ ಯುವ ಪೀಳಿಗೆಯು ನಮ್ಮ ಭಾಷೆ, ಸಂಸ್ಕೃತಿ, ವಿಚಾರಗಳ ಬಗ್ಗೆ ತಿಳಿಯಬೇಕಾಗಿದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರಾಜೇಶ್ವರಿ ವೈ ಎಂ ಅವರು  ಕನ್ನಡ ವೇದಿಕೆಯು ಬೆಳೆದ ಬಗೆ ಹಿಂದೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಕಲಿ-ನಲಿ ಕಾರ್ಯಾಗಾರದ ಬಗ್ಗೆ ಪ್ರಾಸಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಕನ್ನಡ ವಿಭಾಗದ ಅಧ್ಯಾಪಕರು, ಇತರ ವಿಭಾಗಗಳ ಅಧ್ಯಾಪಕರು ಹಾಗೂ ಕನ್ನಡ ವೇದಿಕೆಯ ಹಿಂದಿನ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗೌತಮ್‌ ಮತ್ತು ವರ್ಷಿಣಿ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಕನ್ನಡ ವೇದಿಕೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು